Uncategorized

On the Path of Discovery

Our editors Chetana and Bhargavi recap a fun set of events we held to celebrate Wonder Why Week :
Panipuri Inside a Spaceship anyone?
Hands soar up in the air like rockets launching. We’re at Bengaluru’s Nehru Planetarium, it’s the Saturday ahead of the National Science Day, which calls for a morning of storytelling, quizzing and sending rockets up into the air.

Bhavna Vyas, a storyteller and illustrator with Pratham Books’ titles (among others) to her name, has the children’s attention. She has told them three stories — Ammachi’s Amazing Machines (an all-time favourite with the coolest granny you’ve ever met), Gul in Space (a sweet tale about a girl who wants to celebrate her birthday with the sun and the stars) and Panipuri Inside a Spaceship (a forthcoming title about two children who want to know what astronauts eat while on a mission).

They’re having fun, but how much trivia they know about everything out there is staggering. Bhavna asks one particularly enthusiastic girl what she’s going to be when she grows up: an astronaut, a scientist? The girl surprises us all with “no, a writer!” — a breed most of us identify with.




Time for the prizes? Not yet, Bhavna has another surprise up her sleeve. She has brought paper rockets, colours and straws. Soon all the children are blowing into straws and launching the rockets they’ve just coloured. Wheee!

Meanwhile, every correct answer during the quiz has won the children a Pratham Books’ title; we’re happy that we’ve nearly run out of books. We’re all taking something away — the children have the books and we the realisation that there is so much out there we still know nothing about.


ಕಥಾಕೂಟ: ಗಾಳಿ ಅಳೆದು, ಹೆಜ್ಜೆ ಲೆಕ್ಕ ಮಾಡೋಣವಾ?(Let’s weigh Air, Count Footsteps) ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಪ್ರಥಮ್ ಬುಕ್ಸ್ ನ “ಗಾಳಿ ಏಕಿಷ್ಟು ಭಾರ”, “ನಂದಿನಿಎಲ್ಲಿದ್ದಾಳೆ” ಎಂಬ ಕಥೆಗಳನ್ನು ಓಕಳಿಪುರದ ಸರಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತಪಡಿಸಲಾಯಿತು. ಗಾಳಿಗೆ ಭಾರ ಇದೆಯಾ? ಇದ್ದರೆ ಎಷ್ಟು? ತೂಕ ಮಾಡೋಕೆ ಆಗುತ್ತಾ? ಪ್ರಯೋಗ ಮಾಡಿ ನೋಡೋಣವಾ? ಈ ಕೌತುಕದ ಪ್ರಶ್ನೆಗಳಿಗೆಲ್ಲಾ ಮಕ್ಕಳು ಕಣ್ಣರಳಿಸಿ ನೋಡುತ್ತಿದ್ದರು. ವಿಜ್ಞಾನ, ಗಣಿತ ವಿಷಯಗಳನ್ನು ಕ್ಲಾಸಲ್ಲಿ ಕೇಳಿ, ಬರೆದು ಮುಗಿಸಿದರೆ ಒಂದೆರಡು ಅಂಕ ಹೆಚ್ಚು, ಕಡಿಮೆ ಬರಬಹುದು ಅಷ್ಟೆ. ಆದರೆ, ಮೂಲ ಪರಿಕಲ್ಪನೆಗಳನ್ನು ತಮ್ಮದೇ ರೀತಿಯಲ್ಲಿ ಅರ್ಥ ಮಾಡಿಕೊಂಡು, ಬಳಸಲು ಮಕ್ಕಳು ವಾಸ್ತವದಲ್ಲಿ ಪ್ರಯೋಗಶೀಲರಾಗಬೇಕು, ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳುವಂತಾಗಬೇಕು. ಈ ಆಲೋಚನೆಯನ್ನು ಚಟುವಟಿಕೆಗಳ ರೂಪಕ್ಕೆ ತರುವ ಕಥೆಗಳ ಬಗ್ಗೆ ಕಥಾ ಕೂಟದಲ್ಲಿ ಮಾಹಿತಿ ನೀಡಲಾಯಿತು.ಈ ಕಥೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ವಿಜ್ಞಾನ ಸಂವಹನಕಾರ, ಸಂಪ ನ್ಮೂಲ ವ್ಯಕ್ತಿ ಕೊಳ್ಳೇಗಾಲ ಶರ್ಮ ಮಕ್ಕಳೊಂದಿಗೆ ಮಗುವೇ ಆಗಿ ಬೆರೆತು ಕಥೆ ಹೇಳಿದರು.ದಿನ ನಿತ್ಯದ ಸಾಮಾನ್ಯ ವಿಷಯಗಳನ್ನೇ ಇಟ್ಟುಕೊಂಡು, ಸರಳ ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳ ಕುತೂಹಲ ತಣಿಸಿದರು. ಬಣ್ಣ-ಬಣ್ಣದ ಬಲೂನುಗಳನ್ನು ಊದುತ್ತಾ, ಎಳನೀರು ಕುಡಿಯುವ ಪ್ಲಾಸ್ಟಿಕ್ ಕೊಳವೆಗಳನ್ನು ಆಯತಾಕಾರದಲ್ಲಿ ಜೋಡಿಸುತ್ತಾ ಮಕ್ಕಳು ಸಂತಸಪಟ್ಟರು.ಸರಕಾರಿ ಬಾಲಕರ ಪ್ರಾಥಮಿಕ ಶಾಲೆ, ಆರ್.ಜಿ.ಅಯ್ಯಂಗಾರ್ ಅನುದಾನಿತ ಶಾಲೆಯ 120ಕ್ಕೂ ಹೆಚ್ಚು ಮಕ್ಕಳು, ಶಿಕ್ಷಕಿ ಪುಷ್ಪಾ, ಅನುವಾದಕ ಮಾಧವ್ ಐತಾಳ್, ಪ್ರಥಮ್ ಬುಕ್ಸ್ ನ ಹಿರಿಯ ಸಂಪಾದಕಿ ಮಾಲಾ ಕುಮಾರ್, ಕನ್ನಡ ವಿಭಾಗದ ಹೇಮಾ ಡಿ.ಖುರ್ಸಾಪುರ,ಭಾರ್ಗವಿ, ಸಮನ್ವಯಕಾರ ಕಾಶಿ ಇದ್ದರು.
“ಗಾಳಿ ಏಕಿಷ್ಟು ಭಾರ” ಕಥೆಯಲ್ಲಿ ಗಾಳಿಯ ಸಾಂದ್ರತೆಯನ್ನು ಲಕ್ಷ್ಮೀ ಮತ್ತು ಸ್ನೇಹಿತರು ಕಂಡು ಕೊಂಡಿದ್ದು ಹೇಗೆ ಎಂದು ತಿಳಿಯಿರಿ. ತರಕಾರಿಗಳ ಭಾರಕ್ಕಿಂತ ಬಲೂನಿನ ಭಾರ ಹೆಚ್ಚೇ,
ಆದರೂ ಹಗುರ ಹೇಗೆ? ಭಾರವಿದ್ದರೂ ತಕಡಿಯ ಮೇಲೆ ಬಲೂನುಗಳನ್ನಿಟ್ಟರೆ ತೂಕದ ಸೂಚಿ ಆಚೀಚೆ ಅಲುಗಾಡುವುದಿಲ್ಲ ಏಕೆ? ಎಂಬಂತಹ ಸರಳ, ಕೌತುಕದ ಪ್ರಶ್ನೆಗಳು ಮೂಡುತ್ತವೆ.ಇನ್ನು, ವರ್ಗೀಕರಣದ ಕಲ್ಪನೆಯನ್ನೇ ಮೂಲ ವಸ್ತುವಾಗಿಸಿ ಬರೆದಿರುವ “ನಂದಿನಿ ಎಲ್ಲಿದ್ದಾಳೆ” ಕಥೆಯಲ್ಲಿ ಹೆಜ್ಜೆ ಗುರುತುಗಳ ಗಾತ್ರವನ್ನು ಗುರುತಿಸುತ್ತಾ ಮಕ್ಕಳು ಕಲಿಯಬಹುದು.

Tags:

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here