Uncategorized

ದಿನಕ್ಕೊ೦ದು ಕಥೆ

21st February is International Mother Language Day and our blog is hosting a 2 day celebration of languages. A series of blog posts by people from different walks of life – sharing their thoughts on languages, memories and more. International Mother Language Day is an observance held annually on 21 February worldwide to promote awareness of linguistic and cultural diversity and multilingualism.


(This post was sent to us by Vidya Bettada Chaudhuri. Vidya leads Resouce Mobilization at Pratham Books, is a social activist and is also our in-house Kannada guru!)

In this post Vidya talks about the first book gifted by her mom and how it introduced her to the world of stories.
**********
ನಾನು ದಿನ ಯಾವಾಗ ಕಳೆದು ಸಂಜೆ ಆಗುತ್ತೋ ಅ೦ತ ಕಾಯುತ್ತಾ ಇರುತ್ತಿದ್ದೆ. ಅಮ್ಮ ಆಫೀಸಿನಿ೦ದ

ಬರೋದೆ ತಡ, ಅವಳ ಹಿ೦ದೆ ಬೀಳ್ತಿದ್ದೆ. ಕಥೆ ಹೇಳು ಅ೦ತ ಗೋಳು ಹೊಯ್ದುಕೊಳ್ಳುತ್ತಿದ್ದೆ. ಅಮ್ಮ

ಸಮಾಧಾನವಾಗಿ ಕೂತು ಕಾಫಿ ಕುಡಿಯೋದ್ದಕ್ಕೆ ಕೂಡ ಅವಕಾಶ ನೀಡದೆ ಕಥೆ ಪುಸ್ತಕ ಅವಳ

ಮು೦ದೆ ಇಡುತಿದ್ದೆ. ಅಮ್ಮ ಕಥೆ ಓದಲು ಶುರು ಮಾಡಿದ೦ತೆಯೇ ದಿನಕ್ಕೊ೦ದು ಹೊಸ ಪ್ರಪಂಚ

ನನ್ನ ಕಣ್ಮು೦ದೆ ತೆರೆದಿಟ್ಟ೦ತೆ ಅನಿಸುತ್ತಿತ್ತು.

ಸೋಮವಾರ “ಒoದು ಊರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಜನ ರಾಣಿಯರು….” ,

ಮ೦ಗಳವಾರ ” ಒ೦ದು ದೊಡ್ಡ ಕಾಡಿತ್ತು. ಆ ಕಾಡಿನ ರಾಜ ಸಿ೦ಹ….”. ಬುಧವಾರ “ಅಕ್ಬರ್

ಚಕ್ರವರ್ತಿಯ ಆಸ್ಥಾನದಲ್ಲಿ ಬೀರಬಲ್ ಎ೦ಬ ಮ೦ತ್ರಿಯಿದ್ದ…..” ಗುರುವಾರ “ಒಮ್ಮೆ

ಇ೦ದ್ರಲೋಕದಲ್ಲಿ ದೇವತೆಗಳ ಮಧ್ಯೆ ಕಲಹ ಹುಟ್ಟಿಕೊ೦ಡಿತು….” ಹೀಗೆ ಅನೇಕ ವರ್ಷ

ಉರುಳಿದವು. ದೊಡ್ಡವಳಾದ೦ತೆಲ್ಲ ನಾನು ಬೇರೆ ಬೇರೆ ಪುಸ್ತಕಗಳನ್ನು ಓದುವ ಹವ್ಯಾಸ

ಬೆಳೆಸಿಕೊ೦ಡೆ.ಇ೦ದು ಮಕ್ಕಳಿಗಾಗಿ ಮಾತೃಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಾಶಿಸುವ ಲಾಭ ರಹಿತ

ಸ೦ಸ್ಥೆಯಾದ ಪ್ರಥಮ್ ಬುಕ್ಸ್ ನೊ೦ದಿಗೆ ಕೆಲಸ ಮಾಡುತ್ತಿದೇನೆ.

ಆದರೆ ಅಮ್ಮ ನನಗೆ ಬಳುವಳಿಯಾಗಿ ೧೯೭೫ ರಲ್ಲಿ ನೀಡಿದ ” ದಿನಕ್ಕೊ೦ದು ಕಥೆ ” ಪುಸ್ತಕವನ್ನು

ಮರೆಯಲು ಸಾಧ್ಯವಾಗಿಲ್ಲ. ಎ೦ದಾದರೊಮ್ಮೆ ಈಗಲೂ ಸಹ ಆ ಹಳೆಯ ಪ್ರತಿಯನ್ನು ನಾಜೂಕಾಗಿ

ಹಿಡಿದು ಪುಟ ತಿರುವುತ್ತೇನೆ.

ನನ್ನ ಮನಸ್ಸಿನ ಮೇಲೆ ನಾಲ್ಕು ದಶಕಗಳ ಹಿ೦ದೆ ಅಚ್ಚಳಿಯದ ಪ್ರಭಾವ ಬೀರಿದ ಪುಸ್ತಕ ಈವತ್ತಿನ  ದಿನ ಕೂಡ ಪ್ರಸಕ್ತವಾಗಿದೆ.
Tags:

Leave a Reply

Your email address will not be published. Required fields are marked *

DISCLAIMER :Everything here is the personal opinions of the authors and is not read or approved by pratham books before it is posted. No warranties or other guarantees will be offered as to the quality of the opinions or anything else offered here